SWASTHI 2022

ಜೈ ಶ್ರೀ ಗುರುದೇವ್
ದಿನಾಂಕ 09.06.22 ಗುರುವಾರ ಬೆಂಗಳೂರು, ಮಹಾಲಕ್ಷ್ಮಿ ಪುರಂ ಬಿಜಿಎಸ್ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ತರಗತಿಗಳ ಪ್ರಾರಂಭೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ SWASTHI -2022 ಸಮಾರಂಭದಲ್ಲಿ ಶ್ರಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾII ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಪೂಜ್ಯ ಶ್ರೀ ಸೌಮ್ಯನಾಥ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ನಾಗರಿಕ ಸೇವೆಗಳಿಗೆ ಆಯ್ಕೆಯಾದ ಕು.ಕಲ್ಪಶ್ರಿ IAS, ಕು. ಅರುಣ IRS, ಮತ್ತು ಕು.ಚೇತನ್ ಕೆ IRS ರವರನ್ನು ಪೂಜ್ಯ ಮಹಾಸ್ವಾಮೀಜಿ ರವರು ಗೌರವಿಸಿದರು. ಗಣ್ಯರ ಜೊತೆಗೆ ಆಡಳಿತಾಧಿಕಾರಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.